, ,

Win

ಎಚ್ಚರ! ಸಾಕು ನಾಯಿಗಳಿಗೆ ಮತ್ತಿಕ್ಕಬೇಡಿ

ಸಂಶೋಧನೆಯಲ್ಲಿ ಸಾಕು ನಾಯಿಗಳಿಗೆ ಮುತ್ತಿಕ್ಕಬಾರದು. ಹಾಗೆ ಮಾಡಿದರೆ ಅದರ ಮುಖದಲ್ಲಿರುವ ಹಾನಿಕಾರ ಬ್ಯಾಕ್ಟೀರಿಯಗಳು ಬಾಯಿಯೊಳಗೆ ಹೋಗಿ ಬಿಡುತ್ತದೆ ಎನ್ನುವಂಶ ಪತ್ತೆಯಾಗಿದೆ.

 

ಸಾಕು ನಾಯಿಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಇದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.ಬ್ಯಾಕ್ಟೀರಿಯ ಎಲ್ಲಿಯಾದರೂ ಬಾಯಿಯನ್ನು ಪ್ರವೇಶಿಸಿದರೆ ಸಾಕು ಅಪಾಯಕಾರಿ ರೋಗಗಳು ಬರುವ ಸಾಧ್ಯತೆ ಇದೆ. ಪೆರಿಯೊಡೆಂಟೈಸ್ ರೋಗದ ತೆಕ್ಕೆಗೆ ಬೀಳುವ ಸಾಧ್ಯತೆ ಹೆಚ್ಚಿದೆ.

 

ಪೆರಿಯೊಡೆಂಟೈಸ್ ನಾಯಿಗಳನ್ನು ಕಾಡುವ ರೋಗವಾಗಿದ್ದು, ಈ ಬ್ಯಾಕ್ಟೀರಿಯಾಗಳು ನಾಯಿಯನ್ನು ಲಲ್ಲೆಗೆರೆದಾಗ ಬಾಯಿಯೊಳಗೆ ಹೊಕ್ಕು ನಿಮಗೆ ಹಾನಿಮಾಡುತದೆ. ನಿಮ್ಮ ಒಸಡಿಗೆ ಅಪಾಯಕಾರಿ ರೋಗ ತಗಲುತ್ತದೆ. ಹಲ್ಲುಗಳಲ್ಲಿ ಬ್ಯಾಕ್ಟೀರಿಯ ಸೇರಿ ಹಾನಿ ಮಾಡುತ್ತವೆ.

 

ಸಾಕು ನಾಯಿಗಳ ಹಲ್ಲುಗಳ ಅಧ್ಯಯನದಲ್ಲಿ ತಿಳಿದು ಬಂದ ವಾಸ್ತವಿಕತೆ ಇದಾಗಿದೆ. ಹಲ್ಲಿಗೆ ಒಸಡಿಗೆ ಹಾನಿಮಾಡುವ ಈ ರೋಗ ಮಾನವರಲ್ಲಿಲ್ಲ. ಆದರೆ ನಾಯಿಗಳಲ್ಲಿ ಕಂಡು ಬರುತ್ತದೆ. ಅಧ್ಯಯನದಿಂದ ನಾಯಿ ಸಾಕುವ ಶೇ.16ರಷ್ಟು ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ ಎನ್ನುವಂಶ ತಿಳಿದು ಬಂತು. ನಾಯಿಗೆ ಮುತ್ತು ನೀಡಬಾರದು ಎಂದು ಕಾರ್ನಲ್ ಯುನಿವರ್ಸಿಟಿಯ ವೆಟನರಿಮೆಡಿಸಿನ್ ಕಾಲೇಜಿನ ಡಾ. ಪಾಲ್ ಎಚ್ಚರಿಕೆ ನೀಡಿದ್ದಾರೆ.

 

 

ತಾಯಿಗಾಗಿ ಬಾವಿ ತೋಡಿದ ಧೀರ ಹೆಣ್ಣು ಮಕ್ಕಳು

ಫೇಸ್‌ಬುಕ್ ನೀಡುತ್ತಿದೆ ಗುಪ್ತ ಫೀಡ್‌ ಫೀಚರ್ !; ಏನಿದರ ವಿಶೇಷತೆ ?