,

ಉರಿ ಮೂತ್ರಕ್ಕೆ ಇಲ್ಲಿದೆ ಮನೆಮದ್ದು

ಉರಿಮೂತ್ರ ಎಲ್ಲ ಸೀಝನ್‍ಲ್ಲಿಯೂ ಬರುತ್ತದೆ. ಆದರೆ ಬೇಸಗೆಯ ಉರಿ ಬಿಸಿಲಿನಲ್ಲಿ ಸುತ್ತಾಡಿದರೆ, ಮತ್ತು ಹೆಚ್ಚು  ಮೆಣಸಿನ ಮಸಾಲೆಯ ವಸ್ತು ತಿಂದರೆ ಹೆಚ್ಚು ಉರಿಯ ವಸ್ತುಗಳನ್ನು ಸೇವಿಸಿದರೆ ಶರೀರದ ಉಷ್ಣ ಹೆಚ್ಚಾಗುತ್ತದೆ. ಇದರ ಪ್ರಭಾವ ಮೂತ್ರಾಶಯದ ಮೇಲೆಯೂ ಆಗುತ್ತದೆ. ಹೀಗಾಗಿ ಮೂತ್ರ ಮಾಡುವಾಗ ಉರಿಯಾಗುತ್ತದೆ. ಮತ್ತು ಉರಿ ಅನುಭವವಾಗುತ್ತದೆ.ಇದನ್ನು ಬಹು ಸುಲಭ ಚಿಕಿತ್ಸೆಯ ಮೂಲಕ  ಗೋಂದ್  ಕದಿರಾ ಅಥವಾ ಕದಿರಾ ಅಂಟನ್ನು ಉಪಯೋಗಿಸಿ ಉರಿ ಮೂತ್ರವನ್ನು ತಡೆಯಬಹುದು. ಕದಿರ ಅಂಟು ಮರದಿಂದ ಪಡೆಯುವ ಗೋಂದು ಆಗಿದೆ.
ಕದಿರಾ ಮರದಿಂದ ಈ ಅಂಟನ್ನು ಪಡೆಯಲಾಗುತ್ತದೆ.ಅಂಟನ್ನು ರಾತ್ರೆ ನೀರಿನಲ್ಲಿ ಹಾಕಿಟ್ಟು ಬೆಳಗ್ಗೆ ಉಪಯೋಗಿಸಬೇಕು. ಇದನ್ನು ಸೇವಿಸದರೆ ಶರೀರದಲ್ಲಿ ಶಕ್ತಿ ಹೆಚ್ಚಳವಾಗುತ್ತದೆ. ಉರಿಮೂತ್ರ, ಕೈಕಾಲು ಉರಿ, ತಲೆಯುರಿ, ಹೆಚ್ಚು ಬಯಾರಿಕೆ ಆಗುವುದು ಇತ್ಯಾದಿಯಿಂದ ಮುಕ್ತರಾಗಲು ಇದನ್ನು ಸೇವಿಸಬೇಕು.
ಉರಿಯಿಂದ ಮುಕ್ತಿ:
ಕೆಲವರಿಗೆ ಉಷ್ಣಕಾಲದಲ್ಲಿ ಉರಿಮೂತ್ರದೊಂದಿಗೆ ಕೈಕಾಲು ಉರಿ ಆಗುತ್ತದೆ. ಇಂತಹವರು ಕದಿರ ಅಂಟು ಬಳಸುವುದರಿಂದ ಉರಿಯನ್ನು ತಡೆಗಟ್ಟಲು ಸಾಧ್ಯವಿದೆ. ನಿಮಗೆ ಕೈಕಾಲು  ಉರಿ ಇದ್ದರೆ ರಾತ್ರೆ ಎರಡು ಚಮಚ ಮಲಗುವ ಮುಂಚೆ ಒಂದು ಗ್ಲಾಸು ನೀರಿಗೆ ಹಾಕಿಡಿರಿ. ಬೆಳಗ್ಗೆ ಇದಕ್ಕೆ ನೀರು ಸೇರಿಸಿ ಕುಡಿಯಿರಿ. ನಿಮ್ಮ ಮೂತ್ರ ಉರಿಗೆ ಹತ್ತು ಇಪ್ಪತ್ತು ಗ್ರಾಂ ಕದಿರ ಅಂಟನ್ನು ಶರಬತ್ತು ಮಾಡಿ ಬೆಳಗ್ಗೆ ಮತ್ತು ಸಂಜೆ ಕುಡಿಯಿರಿ.
ಆಯಾಸ ಮತ್ತು ನಿಶ್ಶಕ್ತಿ: ಕದಿರ ನಿಶ್ಶಕ್ತಿಮತ್ತು ಆಯಾಸವಾಗುವುದಿದ್ದರೆ ಹಾಲಿಗೆ ಕದಿರ ಅಂಟನ್ನು ಸಕ್ಕರೆ ಹಾಕಿ ಕುಡಿಯಿರಿ.  ತಲೆತಿರುಗುವುದು, ಮೈಗ್ರೀನ್ ಸಮಸ್ಯೆಯಿದ್ದರೂ ಅರ್ಧಲೋಟ ಹಾಲಿಗೆ ಕದಿರ ಅಂಟನ್ನು ಹಾಕಿ ಸಕ್ಕರೆಸೇರಿಸಿ ಕುಡಿದರೆ ಪ್ರಯೋಜನವಾಗುತ್ತದೆ.
ಲುಕ್ಯೋರಿಯಕ್ಕೂ ಉಪಯುಕ್ತ:
ಕದಿರಗೋಂದು ಸೇವನೆ ಮಹಿಳೆಯರಿಗೆ ಪ್ರಯೋಜನಕಾರಿ ಹೆರಿಗೆಯಾದ ಬಳಿಕ , ಋತುಶ್ರಾವದಲ್ಲಿ ಏರು ಪೇರು ಆದರೆ ಅಥವಾ ಲುಕ್ಯೋರಿಯ ಆದರೆ ಇದನ್ನು ಸೇವಿಸಿ ಪ್ರಯೋಜನ ಸಿಗುತ್ತದೆ. ಮಹಿಳೆಯರಲ್ಲಾಗುವ ನಿಶ್ಶಕ್ತಿ ದೂರವಾಗುತ್ತದೆ.  ಕದಿರ ಸಕ್ಕರೆಯನ್ನು ಸೇರಿಸಿ ಅರೆದು ಸೇವಿಸಿರಿ. ಬಿಸಿಯನ್ನು ಮಾಡದ ಹಾಲಿಗೆ ಹಾಕಿ ಕುಡಿಯಿರಿ
ಫಾಲಿಕ್ ಆಸಿಡ್:
ಕದಿರಾ ಅಂಟಿನಲ್ಲಿ ಪ್ರೊಟೀನ್ ಮತ್ತು ಪಾಲಿಕ್ ಆಸಿಡ್ ಇದೆ. ಇದು ರಕ್ತ ಹೆಚ್ಚಿಸಲು ಸಹಾಯಕವಾಗಿದೆ. ಹತ್ತರಿಂದ ಇಪ್ಪತ್ತು ಗ್ರಾಮ್ ಕದಿರ ರಾತ್ರೆಯಲ್ಲಿ ನೀರಿನಲ್ಲಿ ಹಾಕಿ ಬೆಳಗ್ಗೆ ಅದೇ ನೀರಿಗೆ ಸಕ್ಕರೆ ಹಾಕಿ ಶರಬತ್ತುಮಾಡಿ ಕುಡಿಯಿರಿ.  ಇದನ್ನುಪ್ರತಿದಿನ ಕುಡಿದರೆ ರಕ್ತ ಹೆಚ್ಚುತ್ತದೆ.

ತಾಯಿ ಪ್ರೀತಿಯ ಈ ಸಂದೇಶ; ವೀಡಿಯೊ ನೋಡಿ!

ಬದಲಾಗುತ್ತಿದೆ ಭಾರತ ; ಇದು ಪೆಟ್ರೋಲ್ ಪಂಪ್ ಅಲ್ಲ !