,

Angry Cry Cute Geeky LOL Love OMG Win WTF

ಉದ್ದದ ಹುಡುಗರನ್ನು ಹುಡುಗಿಯರು ಲೈಕ್ ಮಾಡುತ್ತಾರೆ ಯಾಕೆ ಗೊತ್ತಾ?

ಹುಡುಗಿಯರು ಇಷ್ಟ ಪಡಲು ಏನು ಮಾಡಬೇಕು ?

ಕೆಲವೊಮ್ಮೆ ಹುಡುಗರು ತಮ್ಮನ್ನು ಹುಡುಗಿಯರು ಇಷ್ಟ ಪಡಲು ಏನು ಮಾಡಬೇಕೆಂದು ಯೋಚಿಸಿ ಯೋಚಿಸಿ ತಲೆ ಚಿಟ್ಟು ಹಿಡಿಸಿಕೊಳ್ಳುತ್ತಾರೆ. ಆದರೆ ಹುಡುಗಿಯರ ಖುಷಿ ಪಡಿಸಿ ಅವರ ಮನಸ್ಸು ಗೆಲ್ಲಲು ಬಹಳ ಎಚ್ಚರದಿಂದ ವರ್ತಿಸುವುದು ಜರೂರಾಗಿದೆ. ಹೆಚ್ಚಿನ ಹುಡುಗಿಯರು ಸ್ಮಾರ್ಟ್ ತಿಳುವಳಿಕೆಯುಕ್ತ ಹುಡುಗರನ್ನೇ ಬಯಸುತ್ತಾರೆ. ಆದರೆ ಹುಡುಗರು ಹುಡುಗಿಯರ ಕಣ್ಣಿಗೆ ಬೀಳಲಿಕ್ಕಾಗಿ ಅವರ ಮುಂದೆ ಸುಳಿದಾಡುತ್ತಾರೆ. ಬಹಳ ಪ್ರಯತ್ನಮಾಡುತ್ತಾರೆ ಆದರೆ ಯಶಸ್ವಿಯಾಗುವುದು ಕಡಿಮೆ. ಬನ್ನಿ ನಾವು ಹುಡುಗಿಯರು ಇಷ್ಟ ಪಡಲು ಏನು ಮಾಡಬೇಕೆಂದು ತಿಳಿಸುತ್ತೇವೆ.
1. ಉತ್ತಮಸ್ವಭಾವ ಇರಬೇಕು..
ಮಹಿಳೆಯರನ್ನು ಗೌರವಿಸುವ ಹುಡುಗರನ್ನು ಹುಡುಗಿಯರು ಇಚ್ಛಿಸುತ್ತಾರೆ. ಆದ್ದರಿಂದ ನಿಮಗೆ ಗರ್ಲ್‌ಫ್ರೆಂಡ್ ಇದ್ದರೆ ರೆಸ್ಪೆಕ್ಟ್ ಕೊಡಿರಿ. ನೀವು ಯಾರನ್ನು ಪ್ರೀತಿಸುವುದಿದ್ದರೆ ಅವರನ್ನು ಇಷ್ಟಪಡುತ್ತಿದ್ದರೆ ಅವರನ್ನು ಗೌರವಿಸಬೇಕು. ಸುಮ್ಮನೆ ಪ್ರೀತಿ ಆಗುವುದಿಲ್ಲ. ಅವರ ಭಾವನೆಗಳನ್ನು ಗೌರವಿಸಬೇಕು, ಗಮನಿಸಬೇಕು. ಅವರ ವಿಚಾರಗಳನ್ನುಆಲಿಸಬೇಕು.ಯಾವತ್ತು ಅವರನ್ನು ಅಪಮಾನಿಸಬಾರದು. ಅವರ ಕಳೆದು ಹೋದ ಹಳೆಯ ದಿನಗಳನ್ನು ನೆನಪಿಸಬಾರದು. ಯಾಕೆಂದರೆ ಅವರು ಅದನ್ನುಇಷ್ಟಪಡುವುದಿಲ್ಲ.
2.ಪರ್ಸಾನಾಲಿಟಿ ಇರಬೇಕು
ಮೊದಲ ನೋಟಕ್ಕೆ ನಿಮ್ಮ ಬಟ್ಟೆ ಮತ್ತು ನಿಮ್ಮ ಶರೀರ ಕಾಣುತ್ತದೆಯಷ್ಟೇ. ಆದ್ದರಿಂದ ಫಾಸ್ಟ್ ಇಂಪ್ರೆಶ್ಶನ್‌ಗಾಗಿ ನೀವು ಉತ್ತಮ ರೀತಿಯಲ್ಲಿ ಬಟ್ಟೆಬರೆ ಹಾಕಬೇಕು. ಹುಡುಗಿಯರು ಸ್ಟೈಲಿಶ್ ಮತ್ತು ಡೀಸೆಂಟ್ ಬಟ್ಟೆ ತೊಡುವ ಹುಡುಗರನ್ನು ಇಷ್ಟಪಡುತ್ತಾರೆ.
3 ರೋಮ್ಯಾಂಟಿಕ್ ಆಗಿರಬೇಕು.

ರಿಲೇಶನ್ ಶಿಪ್ ನಿಕಟಗೊಳ್ಳಲು ನೀವು ರೋಮ್ಯಾಂಟಿಕ್ ಆಗಿರಬೇಕು. ನೀವು ಹಾಟ್ ಮತ್ತು ಆಕರ್ಷಕವಾಗಿ ಕಾಣಬೇಕು. ನಿಮಗೆ ಪಾರ್ಟನರ್ ಸಿಕ್ಕರೆ ಅವರನ್ನು ಹೊಗಳಿರಿ. ಸುತ್ತಾಡಿಬರುವ ಯೋಜನೆ ಹಾಕಿಕೊಳ್ಳಿರಿ,. ಅವರ ಜೊತೆ ನಗುನಗುತ್ತಾ ಮಾತಾಡಿರಿ ಮತ್ತು ಪ್ರತಿಕ್ಷಣದ ಸಂತೋಷ ಅನುಭವಿಸುವಂತೆ ಮಾಡಿರಿ.
4.ಹಾಸ್ಯಸ್ವಾಭಾವ ಇರಬೇಕು
ತಮಾಷೆ ಮಾಡುವ ವ್ಯಕ್ತಿತ್ವ ಇರುವವರನ್ನು ಹುಡುಗಿಯರು ಇಷ್ಟ ಪಡುತ್ತಾರೆ. ಸೆನ್ಸ್ ಆಫ್ ಹ್ಯೂಮರ್ ಇರುವ ಹುಡುಗರನ್ನು ಕಾಲೇಜು ಹುಡುಗಿಯರು ಇಷ್ಟಪಡುತ್ತಾರೆ. ಮಾತ್ರವಲ್ಲ ಮೆಚ್ಯೂರ್ ವರ್ಕಿಂಗ್ ಗರ್ಲ್ಸ್ ಕೂಡಾ ಇಷ್ಟಪಡುತ್ತಾರೆ. ಯಾವುದೇ ತಮಾಷೆ ಸ್ವಭಾವದ ಹುಡುಗನೊಂದಿಗೆ ಸುತ್ತಾಡಲು ಹುಡುಗಿ ಹೊರಗೆ ಹೋದರೆ ಅವಳಿಗೆ ಬೋರ್ ಹೊಡೆಯುವುದಿಲ್ಲ. ಯಾವತ್ತೂ ಅವನ ತಮಾಷೆ ಅವಳಿಗೆ ನೆನಪಿನಲ್ಲಿರುತ್ತದೆ. ಮತ್ತು ಆಗಾಗ ಭೇಟಿಯಾಗಲು ಬಯಸುತ್ತಾಳೆ
5 ತಿಳುವಳಿಯಿರುವವ ಆಗಿರಬೇಕು.

ಆತ್ಮವಿಶ್ವಾಸ ಇರುವ ಹುಡುಗನನ್ನು ಹುಡುಗಿಯರು ಬಯಸುತ್ತಾರೆ. ಆತ್ಮವಿಶ್ವಾಸ ಇರುವವರು ಸ್ವಯಂ ತಮ್ಮ ಮೇಲೆ ಭರವಸೆ ಇಡುತ್ತಾರೆ. ಇಂತಹವರನ್ನು ಹುಡುಗಿಯರು ಇಷ್ಟಪಡುತ್ತಾರೆ. ಹುಡುಗರ ಈ ಕ್ವಾಲಿಟಿ ಹುಡುಗಿಯರನ್ನು ತಮ್ಮ ಕಡೆಗೆ ಆಕರ್ಷಿಸಲು ಬಹಳ ಉಪಯುಕ್ತವಾಗಿದೆ. ಯಾವುದೇ ಸಂಬಂಧ ನಿಭಾವಣೆಗೆ ತಿಳುವಳಿಕೆ ಅಗತ್ಯವಿದೆ. ಶೋಮ್ಯಾನ್‌ಗಿರಿಯಿಂದ ಹುಡುಗಿಯರನ್ನು ಒಲಿಸಿಕೊಳ್ಳಲುಸಾಧ್ಯವಿಲ್ಲ. ಹುಡುಗಿಯರ ಮನಸ್ಸು ಗೆಲ್ಲಲುಪರಿಪಕ್ವ ವ್ಯಕ್ತಿತ್ವ ಬಹಳ ಅಗತ್ಯವಾಗಿದೆ.

6. ಕಾಳಜಿ ಕೊಡುವವ ಆಗಿರಬೇಕು.
ಯಾವತ್ತೂ ಗೆಳತಿಯ ಮಾತನ್ನು ಕೇಳಬೇಕು. ಅವಳ ಮಾತಿಗೆ ಉತ್ತರ ನೀಡಬೇಕಾಗಿದೆ.ಒಂದು ವೇಳೆ ತಪ್ಪು ಮಾತು ಹೇಳುವುದಿದ್ದರೆ ತಿದ್ದಬೇಕು. ಮನವರಿಕೆ ಮಾಡಿಕೊಡಬೇಕು. ಅವಳ ಪ್ರತಿ ಚಿಕ್ಕಚಿಕ್ಕ ಮಾತಿಗೂ ಗಮನ ನೀಡಬೇಕು. ತಮ್ಮಭಾವನೆಗಳನ್ನುಅವಳೊಂದಿಗೆ ಹಂಚಿಕೊಳ್ಳಬೇಕು. ಅವಳು ಕೇಳದಿದ್ದರೂ ಸಲಹೆ ಕೊಡಬೇಕು.
7. ಪ್ರತಿಕ್ಷಣವೂ ಜೊತೆಯಾಗಿರಬೇಕು.
ಪರಸ್ಪರ ನೀವು ಅರಿತುಕೊಂಡು ಪ್ರತೀಕ್ಷಣವೂ ಒಬ್ಬರು ಇನ್ನೊಬ್ಬರ ಜೊತೆ ಇರುವುದಕ್ಕೆ ಪ್ರಯತ್ನಿಸಬೇಕು. ಆಗ ತಮ್ಮ ಸಂಬಂಧಗಳಲ್ಲಿ ಭರವಸೆ ಹೊಂದಬೇಕು. ಸಣ್ಣಸಣ್ಣ ಮಾತು ಮನಸ್ಸಿನಲ್ಲಿಟ್ಟುಕೊಳ್ಳಬಾರದು. ಸಂಬಂಧದಲ್ಲಿ ಯಾವುದೆ ಕಷ್ಟ ಬಂದರೆ ಪ್ರತಿಯೊಂದೂ ಕಷ್ಟ ಸಂದರ್ಭದಲ್ಲಿ ಜೊತೆಯಾಗಿರಿ.
8. ಹುಡುಗಿಯರಿಗೆ ಉದ್ದದ ಹುಡುಗ ಇಷ್ಟವಾಗುತ್ತಾರೆ..
ಹುಡುಗಿಯರು ಉದ್ದ ಹುಡುಗರನ್ನು ಯಾಕೆ ಇಷ್ಟ ಪಡುತ್ತಾರೆಂದರೆ ತಬ್ಬಿಕೊಳ್ಳುವ ಸಮಯದಲ್ಲಿ ಹಾಯಾಗಿರುತ್ತದೆ ಎನ್ನುವುದಕ್ಕಾಗಿದೆ. ಉದ್ದದ ತೋಳುಗಳು ಎಲ್ಲ ಕಡೆಯಿಂದ ಆವರಿಸಿಕೊಳ್ಳುತ್ತದೆ. ಉದ್ದದ ಹುಡುಗರು ಎಲ್ಲರೀತಿಯ ದೈಹಿಕ ರಕ್ಷಣೆ ನೀಡಬಲ್ಲರುಎಂದು ಹುಡುಗಿಯರ ಭಾವನೆಯಾಗಿದೆ. ಆದ್ದರಿಂದ ಹುಡುಗಿಯರು ಉದ್ದದ ಹುಡುಗರನ್ನು ಇಷ್ಟ ಪಡುತ್ತಾರೆ. ಅವರತ್ತ ಆಕರ್ಷಿತರಾಗುತ್ತಾರೆ.

ಸಾವಿನಲ್ಲೂ ಒಂದಾದ ನಾಗಗಳ ಜೋಡಿ

ಹೃದ್ರೋಗಿಗಳಿಗೆ ಶುಭ ಸುದ್ದಿ !