,

Angry WTF

ಉಗುರಿನಲ್ಲಿ ಈ ಬಿಳಿ ಕಲೆಗಳು ಯಾಕೆ ಬರುತ್ತೆ ಗೊತ್ತಾ?: ಉಗುರಿನಿಂದ ಯಾವ ರೋಗಗಳನ್ನು ಪತ್ತೆ ಹಚ್ಚಬಹುದು ನೋಡಿ !

ಕೆಲವೊಮ್ಮೆ ಜನರ ಉಗುರಿನಲ್ಲಿ ಬಿಳಿ ಕಲೆ ಕಂಡುಬರುತ್ತದೆ. .ಅವರು ಈ ಕಲೆಯನ್ನು ತಮ್ಮ ಆರೋಗ್ಯದೊಂದಿಗೆ ಜೋಡಿಸಿ ನೋಡುತ್ತಾರೆ. ಇಷ್ಟೇ ಅಲ್ಲ. ಈ ಬಿಳಿ ಕಲೆಗಳೊಂದಿಗೆ ಜೋಡಿಕೊಂಡಿರುವ ಹಲವಾರು ಮಿಥ್ಯವೂ ಇದೆ.  ಕೆಲವೊಮ್ಮೆ ಶರೀರದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಇಂತಹ ಬಿಳೆ ಕಲೆಗಳು ಬರುತ್ತವೆ ಎನ್ನಲಾಗುತ್ತದೆ. ಆದರೆ ಇದು ಸರಿಯಲ್ಲ. ನಿಮಗೆ ನಾವು ಇದರ ಕಾರಣವೇನು ಎಂದು ತಿಳಿಸುತ್ತೇವೆ.

ವಿಜ್ಞಾನದ ಪ್ರಕಾರ ಬಿಳಿ ಕಲೆ ಸುಮ್ಮನೆ ಉಗುರಿನ ಕೆಳಗೆ ಮೃತವಾದ ಜೀವಕೋಶಗಳಿಂದಾಗಿ ಆಗುತ್ತದೆ.ಕೆಲವೊಮ್ಮೆ ಯಾವುದೋ ಕಾರಣದಿಂದ ನಮ್ಮ ಬೆರಳಿಗೆ ಕಾರಣವಾಗಿರುತ್ತದೆ. ಆದರೆ ಇದು ನಮಗೆ ಗೊತ್ತಾಗಿರುವುದಿಲ್ಲ ಅಷ್ಟೇ. ಆದರೆ ಕೆಲವು ಸಮಯದ ಬಳಿಕ ಉಗುರು ಬೆಳೆದಂತೆ ಸತ್ತಜೀವಕೋಶದ ಸ್ಥಳದಲ್ಲಿ ಕಲೆಗಳು ಕಾಣಿಸುತ್ತವೆ. ಕೆಲವು ಸಲ ಇದರಲ್ಲಿಬಿ ಳಿ ಕಲೆಯಿರುವಲ್ಲಿ ಫಂಗಸ್ ಇನ್ಫೆಕ್ಷನ್ ಆಗಲು ಸಾಧ್ಯವಿದೆ. ಜ್ವರಕ್ಕೆ ಸಂಬಂಧಿಸಿದ ರೋಗದಿಂದಲೂ ಹೀಗೆ ಅಗಲು ಸಾಧ್ಯವಿದೆ.

ಉಗುರಿನ ಬಣ್ಣ ಏನು ಹೇಳುತ್ತಿದೆ:

ಹಳದಿ ಬಣ್ಣದ ಉಗುರು: ಹಳದಿ ಬಣ್ಣ,ಮಬ್ಬು ಬಣ್ಣ ದುರ್ಬಲ ಉಗುರು ಅನಿಮಿಯದ ಬಗ್ಗೆ , ಹೃದಯಕ್ಕೆ ಸಂಬಂಧಿಸಿದ ತೊಂದರೆ , ಪೋಷಕಾಂಶಗಳ ಕೊರೆ, ಲಿವರಿನ ರೋಗದ ಸಂಕೇತವನ್ನು ಸೂಚಿಸುತ್ತಿದೆ. ಫಂಗಸ್ ಇನ್ಫೇಕ್ಷನ್ ಕಾರಣದಿಂದ ಇಡೀ ಉಗುರು ಹಳದಿ ಯಾಗುತ್ತದೆ. ಕೆಲವು ಸಲ ಪೊಲಿಯೊ, ಥೈರಾಯಿಡ್, ಸಿಹಿಮೂತ್ರತೋಗ ಮತ್ತುಸಿರೋಸಿಸ್‍ನ ಸಂಕೇತವೂ ಅಗಿರಬಹುದು. ಉಗುರಿನ ಹಳದಿ ಮತ್ತು ದಪ್ಪ ಮತ್ತುನಿಧಾನ ಗತಿ ಹೆಚ್ಚಿದ್ದರೆ ಇದುಕೂಡಾ ರೋಗದ ಸಂಕೇತವಾಗಿದೆ.

 ಬಿಳಿ ಉಗುರು: ಕೆಲವು ಸಲ ಉಗುರು ಬಿಳಿಯಾಗಿ ಕಂಡು ಬರುತ್ತದೆ. ಕೆಲವು ಸಲ ಸಂಪೂರ್ಣ ಬಿಳಿಯಾಗಿ ಕಾಣುತ್ತದೆ. ಉಗುರಿನ ಬಿಳಿ ಲಿವರಿನ ರೋಗ ಅಥವಾ ಹೃದಯರೋಗವನ್ನುಸೂಚಿಸಿಸುತ್ತದೆ.

 ಎದ್ದಂತಿರುವ ಉಗುರು: ಹೊರಗೆ ಅಥವಾ ಚರ್ಮದಿಂದ ಸ್ವಲ್ಪ ಎದ್ದು ನಿಂತಂತಿರುವ  ಉಗುರು ಹೃದಯ ಸಮಸ್ಯೆಯ ಹೊರತುಶ್ವಾಸ ಕೋಶ ಹಾಗೂ ಕರುಳಿನ ಉರಿಯೂತವನ್ನು ಸೂಚಿಸುತ್ತಿದೆ.

ನೀಲಿ ಉಗುರುಗಳು: ದೇಹದಲ್ಲಿ ಆಮ್ಲಜನಕವು ಸರಿಯಾಗಿ ಚಲಾವಣೆಯಾಗದಿದ್ದರೆ ಉಗುರಿನ ಬಣ್ಣ ನೀಲಿಯಾಗುತ್ತದೆ. ಇದು ಶ್ವಾಸಕೋಶಗಳು, ನ್ಯುಮೇನಿಯ ಮತ್ತುಹೃದಯ ರೋಗಗಳನ್ನು ಸೂಚಿಸುತ್ತದೆ.

ಅರ್ಧ  ಬಿಳಿ ಮತ್ತು ಅರ್ಧ ಗುಲಾಬಿ ಬಣ್ಣದ ಉಗುರುಗಳು: ಉಗುರಿನ ಬಣ್ಣ ತಟ್ಟನೆ ಅರ್ಧಗುಲಾಬಿ ಮತ್ತು ಅರ್ಧ ಬಿಳಿ ಬಣ್ಣದಲ್ಲಿ ಕಂಡರೆ ಅದು ಮೂತ್ರ ಪಿಂಡ ರೋಗ ಮತ್ತು  ಸಿರೋಸಿಸ್ ರೋಗವನ್ನು ಬೆಟ್ಟುಮಾಡುತ್ತದೆ.

ಕೆಂಪು ಮತ್ತು ನೇರಳೆ ಬಣ್ಣದ ಉಗುರು: ಆಳವಾದ ಕೆಂಪು ಬಣ್ಣವು ಅಧಿಕ ರಕ್ತದೊತ್ತಡವನ್ನು ಸೂಚಿಸುತ್ತದೆ. ಮತ್ತು ನೇರಳೆ ಬಣ್ಣ ರಕ್ತದೊತ್ತಡವನ್ನು ತೋರಿಸುತ್ತದೆ.

ಚಮಚದಂತಹ ಉಗುರುಗಳು: ರಕ್ತಹೀನತೆ, ಅನುವಂಶಿಕ ಕಾಯಿಲೆ, ಅಪಘಾತದ ಸ್ಥಿತಿಯ್ಲಿಯೂ ಉಗುರುಗಳ ಆಕಾರ ಒಂದು ಚಮಚಂದಾಗುತ್ತದೆ.ಮತ್ತು ಉಗುರುಗಳು ಹೊರಗಡೆಗೆ ತಿರುಗುತ್ತದೆ.

 

ಚ್ಯೂಯಿಂಗ್ ಗಮ್‍ ಜಗಿಯುವವರು ಓದಲೇ ಬೇಕಾದ ಸುದ್ದಿ !

ಭಾರದಲ್ಲಿ ಶೀಘ್ರದಲ್ಲಿ ಬರಲಿದೆ 5ಜಿ ನೆಟ್’ವರ್ಕ್!