,

Cry

ಈ ಮುಗ್ದ ಬಾಲಕನನ್ನು ಸಂಕಲೆಯಲ್ಲಿ ಬಂಧಿಸಿದ್ಯಾಕೆ ಗೊತ್ತೇ : ಮನಕಲಕುವ ದೃಷ್ಯ

 

ಚೀನದಲ್ಲಿ ಒಂದು ಘಟನೆ ಇತ್ತೀಚೆಗೆ ಭಾರೀ ಚರ್ಚೆಗೊಳಗಾಗಿದೆ.ಎಂಡುಯಿ ಕ್ಷೇತ್ರದ  ಹೆಫೆಯಿಯಲ್ಲಿ ಓರ್ವ ಹದಿನೇಳು ವರ್ಷದ ಬಾಲಕನ್ನು ಕಳೆದ ಹತ್ತು ವರ್ಷಗಳಿಂದ ಸಂಕಲೆಯಲ್ಲಿ ಕಟ್ಟಿಹಾಕಲಾಗಿದೆ. ಆತ ತೀರ ನಿಕೃಷ್ಟ ರೀತಿಯಲ್ಲಿ ಬದುಕುತ್ತಿದ್ದಾನೆ.

ಒಂದು ವೆಬ್‍ಸೈಟ್ ವರದಿ ಮಾಡಿರುವ ಪ್ರಕಾರ ಹದಿನೇಳು ವರ್ಷದ ಯಾಂಗ್‍ಜಿ ಮಾನಸಿಕ ಅಸ್ವಸ್ಥನಾಗಿದ್ದಾನೆ.ಅವನು ತನ್ನ ಇಬ್ಬರು ಅಜ್ಜಂದಿರು, ಒಬ್ಬ ಚಿಕ್ಕಮ್ಮ ಮತ್ತು  ಇಬ್ಬರು ಸಹೋದರರ ಜೊತೆ ವಾಸಿಸುತ್ತಿದ್ದಾನೆ. ಯಾಂಗ್‍ನ ತಂದೆತಾಯಿ  ಆತ ಚಿಕ್ಕಂದಿನಲ್ಲೇ ಮಾಡುತ್ತಿದ್ದ ಚಟುವಟಿಕೆ ನೋಡಿ ನಮಗೆ ಸಂದೇಹವಾಗುತ್ತಿತ್ತು. ಕೆಲವೊಮ್ಮೆ ಎಲ್ಲಿಗೋ ಒಬ್ಬನೆ ಓಡಿ ಹೋಗುತ್ತಿದ್ದ.

ಅವನಿಗೆಚಿಕಿತ್ಸೆ ಕೊಡಿಸುವಷ್ಟು ನಮ್ಮಲ್ಲಿ ಹಣ ಇಲ್ಲ. ಆದ್ದರಿಂದ ಅವನನ್ನು ಸುರಕ್ಷಿತವಾಗಿ ಇರಿಸಲಿಕ್ಕಾಗಿ ನಾವು ಕಟ್ಟಿಹಾಕುತ್ತಿದ್ದೇವೆ ಎಂದು ಅವರು ಹೇಳುತ್ತಾರೆ. ಯಾಂಗ್ ನ ಅಜ್ಜ ಹತ್ತುವರ್ಷದಿಂದ ಅವನನ್ನು ಕಟ್ಟಿಹಾಕಿ ಮನೆಯೊಳಗೆಯೇ ಇರಿಸಿದ್ದೇವೆ. ಹೀಗೆ ಮಾಡುವುದು ಅನಿವಾರ್ಯವಾಗಿದೆ. ನಾವುನಿಧಾನವಾಗಿ ಆತ ಗುಣಮುಖನಾಗಬಹುದು ಎಂದು ಭಾವಿಸಿದ್ದೆವು .ಆದರೆ ಇಷ್ಟು ಸಮಯ ಆಯಿತು ಅವನು ಸುಧಾರಣೆಯಾಗಲಿಲ್ಲ. ಕಳೆದ ಸೆಪ್ಟಂಬರ್‍ನಲ್ಲಿ ಅವನ ದುಃಖಭರಿತ ಫೊಟೊ ಬಹಿರಂಗವಾಗಿದೆ.

ಫೋಟೊದಲ್ಲಿ ಕೋಳಿಗಳ  ಜೊತೆ ಆಹಾರ ಸೇವಿಸುವುದು. ಆಟವಾಡುವುದು ಕಾಣಿಸುತ್ತಿದೆ. ಆದರೆ ಯಾಂಗ್‍ನ ನೆರವಿಗೆ ಈವರೆಗೆ ಯಾರೂ ಮುಂದೆ ಬರಲಿಲ್ಲ. ಆದರೆ ಅವನ ಜೀವನ ಬದಲಾಗಬಹುದು ಎನ್ನುವ ನಿರೀಕ್ಷೆ ಸುದ್ದಿಯಲ್ಲಿ ವ್ಯಕ್ತವಾಗಿದೆ.

ಫೇಸ್‍ಬುಕ್‍ನಲ್ಲಿ ಈ ಇಬ್ಬರನ್ನು ಬ್ಲಾಕ್ ಮಾಡಲು ಸಾಧ್ಯವಿಲ್ಲ ಯಾಕೆ ಗೊತ್ತಾ ? ಯಾರಿವರು ?

ಗಿಡಗಳನ್ನು ಬೆಳೆಸಲು ಯಾವ್ಯಾವ ವಿಧಾನ ಬಳಸುತ್ತಾರೆ ನೋಡಿ