,

ಇಲ್ಲಿ ರೈಲನ್ನು ಸಂಕಲೆಯಿಂದ ಕಟ್ಟುತ್ತಾರೆ ಯಾಕೆ ಗೊತ್ತಾ ?

 

ಈವರೆಗೆ ನೀವು ಸೈಕಲ್ ಮತ್ತು ಬೈಕ್‍ಗಳನ್ನು ಸಂಕಲೆಗಳಿಂದ ಬಂಧಿಸುವುದನ್ನು ನೋಡಿರಬಹುದು. ಆದರೆ ಮಧ್ಯಪ್ರದೇಶದಲ್ಲಿ ಸನಾವದ್ ರೈಲ್ವೆ ಠಾಣೆಯಲ್ಲಿ ಸಂಕಲೆಯಿಂದ ಕಟ್ಟಿ ಬೀಗಹಾಕಲಾಗುತ್ತದೆ. ರಾತ್ರೆಯಲ್ಲಿ ಅಲ್ಲ. ಬದಲಾಗಿ ಹಗಲಿನಲ್ಲಿ ನಾಲ್ಕು ಬಾರಿ ರೈಲು ಬಂದ ನಂತರ ಹೀಗೆ ಮಾಡಲಾಗುತ್ತದೆ.

ರೈಲು ನಿಲ್ದಾಣಕ್ಕೆ ರೈಲು ಬಂದ ಬಳಿಕ ಇಂಜಿನ್ ಬ್ರೇಕ್‍ಗೆ ಬೀಗ ಹಾಕಲಾಗುತ್ತದೆ. ನಂತರ ಇಂಜಿನ್ ಸಮೀಪ ಚೈನ್ ಎಳೆದು ರೈಲುಪಟ್ಟಿಯ ಹತ್ತಿರ ಕಟ್ಟಿಹಾಕಿ ಬೀಗ ಜಡಿಯಲಾಗುತ್ತದೆ. ರೈಲು ಹೊರಡಲು ಹತ್ತು ಹದಿನೈದು ನಿಮಿಷ ಮೊದಲು ಓರ್ವ ನೌಕರ ಅದನ್ನು ಬಿಚ್ಚುತ್ತಾನೆ.

ಈಗ ಸನಾವದ್ ಮೂಲಕ ಆರು ಬೋಗಿಗಳ ನಾಲ್ಕು ರೈಲು ಓಡಾಡುತ್ತದೆ. ಇದರಲ್ಲಿ ಸನಾವದ್‍ಗೆ ಹೋಗಲು ಬೆಳಗ್ಗೆ 6,9,ಮಧ್ಯಾಹ್ನ 2 ಮತ್ತು 7:30 ಗಂಟೆಗೆ ರೈಲಿದೆ. ಮಹೂನಿಂದ ಬರುವ ರೈಲು ಬೆಳಗ್ಗೆ 8:0, 11:30,4:30, ಮತ್ತು ರಾತ್ರೆ ಹತ್ತು ಗಂಟೆಗೆ ಬರುತ್ತವೆ. ಈ ನಿಲ್ದಾಣಕ್ಕೆ ಬಂದ ಬಳಿಕ ಚೈನಿನಲ್ಲಿಕಟ್ಟಿಹಾಕಲಾಗುತ್ತದೆ. ರೈಲ್ವೆ ಸ್ಟೇಶನ್ ಮಾಸ್ಟರ್ ರಾಧೆಶ್ಯಾಮ್ ಸಿಂಗ್‍ರನ್ನು ಕೇಳಿದಾಗ ಅವರು ಸುರಕ್ಷಾ ದೃಷ್ಟಿಯಿಂದ ಹೀಗೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರೈಲ್ವೆ ವಿಭಾಗದ ನಿಯಮನುಸಾರು ಈಪ್ರಕ್ರಿಯೆ ಎಲ್ಲ ನಿಲ್ದಾಣಗಳಲ್ಲಿ ನಡೆಯುತ್ತದೆ. ರೈಲಿನಲ್ಲಿ ಏನಾದರೂ ಅಪಾಯದ ಸಂದರ್ಭ ಎದುರಾದರೆ ರೈಲು ಲಾಕ್ ಆಗದಿದ್ದರೆ ಇಳಿಜಾರಿನಲ್ಲಿಜಾರುವ ಸಂದರ್ಭ ಇರುತ್ತದೆ. ಇದರಿಂದ ದೊಡ್ಡ ಅವಗಡ ಸಂಬವಿಸಬಹುದಾಗಿದೆ  ಹೀಗಾಗಿ ವಿಭಾಗದ ನಿರ್ದೇಶದಂತೆ ರೈಲಿಗೆ ಲಾಕ್ ಮಾಡಲಾಗುತ್ತಿದೆ.

ತಾಯಿಯ ಹೊಟ್ಟೆಯಲ್ಲಿರುವ ಮಗುವಿನ ಕಾಲಚ್ಚು ನೋಡಿ !

ಪೊಲೀಸ್ ಪಾತ್ರದಲ್ಲಿ ಮಿಂಚಿರುವ ನಟಿಯರ ಬಗ್ಗೆ ಒಂದಿಷ್ಟು ….