, ,

ಇಡೀ ಶಾಲೆಯಲ್ಲಿ ಇರುವುದು ಕೇವಲ ಒಂದೇ ವಿದ್ಯಾರ್ಥಿ ! : ಓದಿ ಇನ್ನೂ ಹಲವು ಸ್ವಾರಸ್ಯಕರ ಮಾಹಿತಿಗಳು !

ಶಿಕ್ಷಣ ನಮ್ಮ ಜೀವನದ ಮಹತ್ವಪೂರ್ಣ ಭಾಗವಾಗಿದೆ. ನಾವು ಕಲಿಕೆಯಿಂದ ಎಷ್ಟೇ ದೂರ ಓಡಿದರೂ . ಕಲಿಯದೆ ಅಭಿವೃದ್ದಿ ಸಾಧ್ಯವಿಲ್ಲ. ಶಾಲೆ ಮತ್ತು ವಿದ್ಯೆ ಅಷ್ಟು ಮಹತ್ವಪೂರ್ಣವಾಗಿದೆ. ನಾವು  ಯೋಚಿಸುವಷ್ಟು ಅದು ಬೋರಾಗಿಯೂ ಇಲ್ಲ. ಶಾಲೆಯಲ್ಲಿ ನಮಗೆ ಬಹಳಷ್ಟು ವಿಷಯಗಳು ಕಲಿಯಲು ಸಿಗುತ್ತವೆ.
ಬನ್ನಿ, ನಾವು ನಿಮಗೆ ಶಿಕ್ಷಣದ ರೋಚಕ ಮಾತುಗಳನ್ನು ಹೇಳುತ್ತೇವೆ. ಅದನ್ನು  ಓದಿದ ಬಳಿಕ ನಿಮ್ಮ ಶಿಕ್ಷಣವನ್ನು ಬೇರೆಯೆ ದೃಷ್ಟಿಯಲ್ಲಿ ನೋಡಲು ಆರಂಭಿಸಿರುತ್ತೀರಿ.
1. ಲಕ್ನೊ ಸಿಟಿಯಲ್ಲಿ ಒಂದು ಮಾಂಟಸ್ಸರಿ ಇದೆ. ಇಲ್ಲಿ ವಿದ್ಯಾಥಿಗಳು 32,000 ಇದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪುಟ್ಟಮಕ್ಕಳು ಕಲಿಯುತ್ತಿರುವುದರಿಂದ ಇದು ವಿಶ್ವದಲ್ಲಿಯೇ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯಾಗಿದೆ.
2. ಚೀನಾದ ಮಕ್ಕಳಿಗೆ ಜಗತ್ತಿನಲ್ಲಿಯೇ ಅತಿಹೆಚ್ಚು ಹೋಮ್‍ವಕ್ರ್ಸ್ ಸಿಗುತ್ತದೆ. ಒಬ್ಬ ಟೀನ್‍ಏಜರ್ ವಾರದಲ್ಲಿ ಸರಾಸರಿ 14 ಗಂಟೆ ಹೋಮ್‍ವರ್ಕ್ ಮಾಡಬೇಕಾಗುತ್ತದೆ.
3.ಚಿಲಿಯಲ್ಲಿ ಬೇಸಗ ರಜೆ ಡಿಸೆಂಬರ್ ಮಧ್ಯದಲ್ಲಿ ಆರಂಭವಾಗಿ ಮಾರ್ಚ್ ಆರಂಭದವರೆಗೆ ಇರುತ್ತದೆ.  ಅಂದರೆ ಅಲ್ಲಿಯ ವಿದ್ಯಾರ್ಥಿಗಳು ಶಾಲೆಯಿಂದ ಮೂರು ತಿಂಗಳು ದೂರವಿರುತ್ತಾರೆ.
4. ಫ್ರಾನ್ಸ್‍ನಲ್ಲಿ ಆಗಸ್ಟ್‍ನಿಂದ ಜೂನ್‍ವರೆಗೆ ವಿದ್ಯಾಭ್ಯಾಸ ಇರುತ್ತದೆ. ಜೊತೆಗೆ ಅಲ್ಲಿನ ಕ್ಲಾಸ್‍ಗಳು ಬಹಳ ತಡವಾಗಿ ಕೊನೆಗೊಳ್ಳುತ್ತದೆ.
5.ಜಪಾನ್‍ನ ಮಕ್ಕಳ ಬಹಳ ಸ್ವತಂತ್ರ ಮನೊಗತಿಯವರು. ಅವರೊಬ್ಬರೆ ಶಾಲೆಗೆ ಹೋಗುತ್ತಾರೆ. ತಮ್ಮ ಶಾಲೆ ಕೊಠಡಿಯನ್ನು ಅವರೇ ಸ್ವಯಂ ಶುಚಿಗೊಳಿಸುತ್ತಾರೆ.
6.ಇಟಲಿಯ ತುರಿನ್‍ನಲ್ಲಿ ಜಗತ್ತಿನ ಅತಿಚಿಕ್ಕ ಶಾಲೆ ಇದೆ. ಇಲ್ಲಿ ಒಬ್ಬಳು ವಿದ್ಯಾರ್ಥಿನಿ ಕಲಿಯುತ್ತಿದ್ದಾಳೆ. ಅವಳ ಹೆಸರು ಸೋಫಿಯ, ಇಲ್ಲಿ ಒಬ್ಬಳೇ ಟೀಚರ್ ಇದ್ದಾರೆ.
7.ಫಿನ್ಲೆಂಡ್‍ನಲ್ಲಿ ಏಳು ವರ್ಷ ಆಗದೆ ಮಕ್ಕಳು ಶಾಲೆಗೆ ದಾಖಲಿಸುವಂತಿಲ್ಲ.
8.ಬ್ರಝಿಲ್‍ನಲ್ಲಿ ತಮ್ಮ ಫ್ಯಾಮಿಲಿ ಜೊತೆ ಊಟಮಾಡುವುದು ಅಲ್ಲಿ ಸಂಸ್ಕøತಿಯಲ್ಲಿ ಸರ್ವೇಸಾಮಾನ್ಯ ವಿಷಯವಾಗಿದೆ.ಆದ್ದರಿಂದ ಅಲ್ಲಿ ಶಾಲೆ ಬೆಳಗ್ಗೆ ಏಳು ಗಂಟೆಗೆ ಆರಂಭವಾಗುತ್ತದೆ. ಮಧ್ಯಾಹ್ನ ಮುಗಿಯುತ್ತದೆ. ಮಕ್ಕಳು ಮಧ್ಯಾಹ್ನ ತಮ್ಮ ಕುಟುಂಬದೊಡನೆ ಕೂತು ಊಟ ಮಾಡುವುದಕ್ಕಾಗಿ ಈ ವ್ಯವಸ್ಥೆ ಅಲ್ಲಿದೆ.
9. ಇರಾನ್‍ನಲ್ಲಿ ಹುಡುಗಮತ್ತು ಹುಡುಗಿಯರಿಗೆ ಬೇರೆ ಬೇರೆ ಕಲಿಸಲಾಗುತ್ತದೆ.

ಕಾಂಡೋಮ್‌ ಆವಿಷ್ಕಾರ ಸಾವಿರ ವರ್ಷ ಹಿಂದೆಯೇ ಆಗಿತ್ತು.!

ಮುಂಬೈಯಲ್ಲಿ ಶುರುವಾಗಿದೆ ಜೈಲು ಟೂರಿಸಂ !: ನಿಮಗೂ ಹೋಗ್ಬಹುದು!