, ,

ಇಡೀ ವಿಶ್ವಕ್ಕೆ ಮಾದರಿಯಾದ ಕಾಮನಬಿಲ್ಲು ಗ್ರಾಮ!

 

ಇಂಡೊನೇಶಿಯದ ಸಣ್ಣ ಗ್ರಾಮ ಸೆಮರೆಂಗ್ ಇಂಟರ್‌ನೆಟ್‌ನಲ್ಲಿ ಸೆನ್ಸೇಶನ್ ಆಗಿದೆ. ಪ್ರತಿಯೊಬ್ಬರು ಈಗ ಈ ಗ್ರಾಮದ ಬಗ್ಗೆ ತಿಳಿದು ಕೊಳ್ಳಲು ಬಯಸುತ್ತಿದ್ದಾರೆ. ಪರ್ವತ ಪ್ರದೇಶಗಳಲ್ಲಿರುವ ಈ ಗ್ರಾಮ ವಿದೇಶಿ ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ.

 

ಇದಕ್ಕೆ ಕಾರಣ ಇಲ್ಲಿನ ಸುಮಾರು 200 ಮನೆಗಳು. ಎಲ್ಲವನ್ನೂ ಬೇರೆ ಬೇರೆ ಬಣ್ಣಗಳಿಂದ ಅಲಂಕೃತಗೊಳಿಸಲಾಗಿದೆ. ಆದ್ದರಿಂದ ಈ ಗ್ರಾಮವನ್ನು ಕಾಮನಬಿಲ್ಲು ರೇನ್‌ಬೊ ಗ್ರಾಮ ಎಂದು ಕೂಡಾ ಕರೆಯಲಾಗುತ್ತದೆ. ರಂಗು ರಂಗಿನ ಮನೆಗಳು ಚರ್ಚೆಯಲ್ಲಿವೆ.

 

ಸೆಮರೇಂಗ್‌ಗ್ರಾಮದ ವೊನೊಸಾರಿ ಸಮುದಾಯ ತಮ್ಮ ವರಮಾನ ಹೆಚ್ಚಿಸಲಿಕ್ಕಾಗಿ ಮತ್ತು ಜೀವನೋಪಾಯಕ್ಕಾಗಿ ಈ ಉಪಾಯವನ್ನುಹುಡುಕಿದೆ.  ಗ್ರಾಮದ ಎಲ್ಲ ಮನೆಗಳ ಗೋಡೆ ಮತ್ತು ಮುಂತಾದುವುಗಳಿಗೆ ಬಣ್ಣಹಚ್ಚಲು ಒಂದು ತಿಂಗಳು ಸಾಕಾಯಿತು. ಆದರೆ ಈ ಮನೆಗಳ ವರ್ಣಾವತಾರವನ್ನುನೋಡಿ ಯಾರೂ ದಂಗಾಗಿಬಿಡಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್ ಆಗುತ್ತಿದೆ.ವಿದೇಶಿಪ್ರವಾಸಿಗರು ಈ ಮನೆಗಳನ್ನು ನೋಡಲು ಬರುತ್ತಿದ್ದಾರೆ.

ಈ ಮನೆಗಳ ಅಲಂಕಾರಕ್ಕೆ ಸರಕಾರ ಮತ್ತುಇತರ ಕಂಪೆನಿಗಳು ಕೂಡಾ ಸಹಾಯ ಮಾಡಿವೆ. ಗ್ರಾಮವನ್ನು ಬದಲಾಯಿಸಿದ್ದರ ಉದ್ದೇಶ ಜನರ ಆದಾಯವನ್ನು ಹೆಚ್ಚಿಸುವುದು. ಯಾಕೆಂದರೆ ಈ ರೀತಿಯ ಹೊಸ ಮನೆಗಳನ್ನು ನೋಡಲು ವಿದೇಶಿ ಪ್ರವಾಸಿಗರು ಬರುತ್ತಾರೆ.

ಟೂರಿಸ್ಟ್‌ಗಳು ಈ ಮನೆಗಳ ಫೋಟೊ ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅದು ವೈರಲ್ ಅಗಿವೆ.

ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದೆ ಎನ್ನುವ ಪ್ರಾಣಿಯ ಫೋಟೊ ವೈರಲ್: ಆದರೆ ಸತ್ಯವೇನು ಗೊತ್ತೇ?

24 ಗಂಟೆಗಳಲ್ಲಿ 36 ಮೊಟ್ಟೆ ಇಟ್ಟ ಕೋಳಿ