, ,

Angry

ಆಟಿಕೆ ಲೇಸರ್ ಲೈಟ್ ತಂದ ಅಪಾಯ: ದೃಷ್ಠಿ ಕಳೆದುಕೊಂಡ ಬಾಲಕಿ

ಆಸ್ಟ್ರೇಲಿಯದ ವೈದ್ಯರೊಬ್ಬರು ತನ್ನ ರೋಗಿಯ ಕುರಿತು ಪ್ರಸ್ತಾವಿಸಿ ತಮ್ಮ ಮಕ್ಕಳ ಎಲ್ಲ ಆಕ್ಟಿವಿಟಿಯತ್ತ ಗಮನಹರಿಸಲು ಮನವಿ ಮಾಡಿದ್ದಾರೆ.  ಅವರಿಗೆ ಹದಿನಾಲ್ಕುವರ್ಷದ ಬಾಲಕಿಯ ಕೇಸು ಬಂದಿತ್ತು. ಆ ಮಗುವಿನ ಕಣ್ಣು ಶೇ. 75ರಷ್ಟು ಹಾನಿಗೊಂಡಿತ್ತು. ಹುಡುಗಿಯ ತಂದೆತಾಯಿಗೆ ಇದರ ಹಿಂದಿನ ಕಾರಣ ಏನೆಂದು ಗೊತ್ತಾಗಿರಲಿಲ್ಲ.

 

ಆಗ ತಂದೆತಾಯಿಯರನ್ನು ವೈದ್ಯರು ಮಗುವಿನ ಪ್ರತಿಯೊಂದು ಚಟುವಟಿಕೆಗಳ ಕುರಿತು ಕೇಳಿದರು. ಆಗ ವೈದ್ಯರಿಗೆ ಹುಡುಗಿ ಲೇಸರ್ ಲೈಟ್‌ನೊಂದಿಗೆ ಆಡುತ್ತಿರುವುದು ಗೊತ್ತಾಯಿತು. ಆಗ ವೈದ್ಯರಿಗೆ ಎಲ್ಲವೂ ಅರ್ಥವಾಗಿತ್ತು. ಹುಡುಗಿಯ ತಂದೆತಾಯಿ ಸಣ್ಣ ಲೇಸರ್ ಲೈಟನ್ನು ನೀಡಿದ್ದರು. ಅದರಲ್ಲಿ ಸಾಮಾನ್ಯವಾಗಿ ಆಟವಾಡುತ್ತಿದ್ದಳು. ಆದರೆ ಈ ಸಣ್ಣ ಆಟಿಕೆ ಮಗುವಿನ ಕಣ್ಣಿಗೆ ಹಾನಿ ಮಾಡಿತ್ತು.

 

ಶಾಶ್ವತ ಕುರುಡುತನ ಬರುತ್ತೆ:

ವೈದ್ಯರ ಪ್ರಕಾರ ಈ ಸಣ್ಣ ಲೇಸರ್ ಲೈಟ್‌ನಿಂದ ಬಹಳ ಹಾನಿ ಇದೆ. ಈ ಪ್ರಕರಣದಲ್ಲಿ ಹುಡುಗಿಯ ಕಣ್ಣು ಸಂಪೂರ್ಣ ಕೆಂಪಾಗಿತ್ತು. ಎಷ್ಟೆಂದರೆ, ಕಣ್ಣನ್ನು ಸರಿಪಡಿಸಲಾಗದಷ್ಟು ಹಾನಿಯಾಗಿತ್ತು. ಯಾವುದೇ ಲೆನ್ಸ್ ಇಟ್ಟರು ಹುಡುಗಿಯ ಕಣ್ಣಿನ ದೃಷ್ಟಿ ಬರುತ್ತಿರಲಲಿಲ್ಲ. ಲೇಸರ್ ಲೈಟ್ಸ್ ಇಂತಹ ಹಾನಿ ಮಾಡಿದೆ. ಆದ್ದರಿಂದ ಲೇಸರ್ ಲೈಟ್ಸ್‌ನಲ್ಲಿ ನಿಮ್ಮ ಮಗು ಆಡಿದರೆ ಅದು ಅಪಾಯಕಾರಿಯೆನ್ನುವುದು ನೀವು ಅರಿತಿರಬೇಕಾಗುತ್ತದೆ.

ಸ್ಕೂಟರ್ ತೊಳೆಯಿಸುತ್ತಾ ಮಕ್ಕಳಲ್ಲಿ ಗುರು ಸೇವೆ ಮಾಡಿಸಿಕೊಂಡ ಟೀಚರ್!

ಕೈಯೇ ಇಲ್ಲ ; ಎಲ್ಲಾ ಕೆಲಸ ಕಾಲಿನಿಂದಲೇ ಮಾಡ್ತಾರೆ ಇವರು !