,

ಅಶ್ಲೀಲ ವೀಡಿಯೊ ನೋಡುವ ಮಗನ ಚಟಕ್ಕೆ ಬೇಸತ್ತು ತಂದೆ ಮಾಡಿದ್ದೇನು ನೋಡಿ !

ಹೊಸದಿಲ್ಲಿ: ಹೈದರಾಬಾದ್‍ನಲ್ಲಿ ತಂದೆಯೊಬ್ಬ ಹಗಲು ರಾತ್ರೆ ಅಶ್ಲೀಲ ವೀಡಿಯೊ ನೋಡುತ್ತಿದ್ದ ಪುತ್ರನ ಕೈಯನ್ನು ಕತ್ತರಿಸಿ ಹಾಕಿದ ಘಟನೆ ನಡೆದಿದೆ.ತನ್ನಕೃತ್ಯದ ಬಗ್ಗೆ ವಿವರಿಸಿದ ತಂದೆ ಮಗನ ಸುಧಾರಣೆ ಗಾಗಿ ಹಲವು ಪ್ರಯತ್ನ ಮಾಡಿದೆ. ಆದರೆ ಅವನು ಕೇಳುತ್ತಿರಲಿಲ್ಲ. ಆದ್ದರಿಂದ ಕೋಪದಿಂದ ಅವನ ಕೈಕತ್ತರಿಸಿದೆ ಎಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ.. ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ.

ಹೈದರಾಬಾದ್‍ನ ಮುಹಮ್ಮದ್ ಕಯ್ಯೂಮ್ ಕುರೈಶಿ ತನ್ನ ಮಗನ ಅಶ್ಲೀಲ ಸಿನೆಮಾ ನೋಡುವ ಅಭ್ಯಾಸದಿಂದ ಬೇಸತ್ತು ಹೋಗಿದ್ದರು. ಪುತ್ರ ಖಾಲಿದ್ ತಂದೆ ಎಷ್ಟೇ ಹೇಳಿದರೂ ಕೇಳದೆ ಸಿನೆಮಾ ಮತ್ತು ಅಶ್ಲೀಲ ಸಿನೆಮಾ ನೋಡಿ ಆರೋಗ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದ. ಮಗ ದಿನವಿಡೀ ಗೆಳೆಯರು ಜೊತೆ ಸುತ್ತಾಡಿ ಬರುತ್ತಿದ್ದ. ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ.

ತಂದೆಯ ಮಾತಿಗೆ ಕಿವಿಕೊಡುತ್ತಿರಲಿಲ್ಲ. ಬುದ್ಧಿವಾದ ಹೇಳಿದಾಗ ಮಗ ತಂದೆಗೆ ಎದುರು ನಿಲ್ಲುತ್ತಿದ್ದ. ಇದರಿಂದ ಬೇಸತ್ತ ಕಯ್ಯೂಮ್ ಮಗನ ಕೈಯನ್ನೇ ಕತ್ತರಿಸಿ ಹಾಕಿದ್ದಾರೆ. ಕತ್ತರಿಸಲ್ಪಟ್ಟ ಕೈ ಮರು ಜೋಡಣೆಯಾಗುವುದು ಕಷ್ಟವಿದೆ ಎಂದುಪೊಲೀಸ್ ಮೂಲಗಳು ತಿಳಿಸಿವೆ. ಈಗ ಖಾಲಿದ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಕ್ಸ್ ಪೂಜೆ : ಹೀಗೊಂದು ಧಾರ್ಮಿಕ ಆಚರಣೆ !

ಕಾಲೇಜು ದಾರಿ ಮಧ್ಯೆ ಅವರಿಬ್ಬರು ಮಾಡಿದ್ದೇನು ?